ಮತ್ತೊಂದು ವರುಷ ನಮ್ಮ ಕಣ್ಣೆದುರೇ ಕಳೆದು(ಮುಗಿದು)ಹೋಗಿದೆ.ನಮ್ಮ ಜೀವನದ ಅಮೂಲ್ಯ ಕ್ಷಣಗಳು,ಮರೆಯಲಾರದ ದಿನಗಳು ಪದೇ-ಪದೇ ಅನುಭವಕ್ಕೆ ಬರುವ ಮಧುರ ಸವಿ ನೆನಪುಗಳು ಈ ಕಾಲ(ವರ್ಷ)ದ ಒಳಗೆ ಅಡಗಿ ಹೋಗಿವೆ. ನಮಗೆ ತಿಳಿದು-ತಿಳಿಯದೇ ಕಾಲದ ವಶಕ್ಕೆ ನಾವುಗಳು ಒಳಗಾಗುತ್ತೇವೆ.ನಮ್ಮ ದೈನಂದಿನ ಚರ್ಯೆಗಳು ನಿಂತರೂ,ಕಾಲವು ಅದಕ್ಕೆ ಕಾಯದೆ ತನ್ನ ಗತಿಯನ್ನು ತೀವ್ರಗೊಳಿಸುತ್ತಾ ಮುಂದುವರಿಯುತ್ತದೆ.ಮತ್ತೊಮ್ಮೆ ಆ ಕಾಲವು ಮರಳಿ ಬಾರದು. ಜೀವನದಲ್ಲಿ ಅನೇಕ ಸಂಘರ್ಷಗಳನ್ನು ನಾವು ಗೆಲ್ಲಲು ಅನೇಕ ಪ್ರಯತ್ನಗಳನ್ನು ನಡೆಸಿರುತ್ತೇವೆ.ಅದರಲ್ಲಿ ಕೆಲವೊಮ್ಮೆ ನಾವುಗಳು ಪರಾಜಿತರಾಗಿದ್ದರು,ಅವುಗಳನ್ನು ಮರೆಸುವಂತಾ ಗೆಲುವು ನಮ್ಮನ್ನು ಸಮಾಧಾನಿಸಲು ನೆರವಾಗುತ್ತದೆ. “ಸೋಲೇ ಗೆಲುವಿನ ಸೋಪಾನ”ಎಂಬ ನಾನ್ನುಡಿಯಿದೆ.ಅದನ್ನು ಸಾಧಿಸಲು ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ ಮುನ್ನುಗ್ಗಬೇಕು ಅಷ್ಟೇ. ಆತ್ಮ ವಿಶ್ವಾಸವೊಂದೆ ಜೀವನದ ಸಂಘರ್ಷಗಳನ್ನು ಗೆಲ್ಲಲು ಇರುವ ಸಿದ್ದಿ ಮಂತ್ರ.ಪ್ರತಿ ದಿನ ಗೆಲುವಿನ ಕ್ಷಣಗಳನ್ನು ನೆನೆಯುತ್ತಾ ಮತ್ತೊಂದು ಮಹತ್ವ ಪೂರ್ಣ ಗೆಲುವಿನ ಕಡೆ ನಮ್ಮ ಹೆಜ್ಜೆ ಹಾಕಬೇಕು.ಗುರಿಯ ಕಡೆ ಲಕ್ಷ್ಯವಿದ್ದರೆ ಗೆಲುವು ಸಾಧ್ಯ..!!! ನಮ್ಮ ಜೀವನದ ಅನೇಕ ಗುರಿಗಳನ್ನು ತಲುಪಬೇಕಿದೆ,ಹಾಗಾಗಿ ನಮ್ಮ ನಡೆ(ಹೆಜ್ಜೆ) ನಿರಂತರ ಸಾಗಬೇಕಿದೆ.ಎಲ್ಲಾ ಅಡೆ ತಡೆಗಳನ್ನು ದೂರ ಮಾಡಿಕೊಂಡು,ನಮ್ಮ ಪ್ರಯತ್ನದಲ್ಲಿ ಸಾಧನೆ ಮಾಡಬೇಕಿದೆ. ನಡೆ ಸಾಗಲಿ ನಿರಂತರ…!! ಪ್ರತಿ ವರುಷದಂತೆ ಇದ್ದರು,ಇದರಲ್ಲಿ ಅನೇಕ ಅವಕಾಶಗಳು ನಮಗಾಗಿ ಕಾದಿವೆ,ಅವುಗಳನ್ನು ಹುಡುಕಿ ತೆಗೆಯುವ ಪ್ರಯತ್ನ ಮಾಡುವ ಸಂಕಲ್ಪ ಮತ್ತೊಮ್ಮೆ ಮಾಡುವ. ಗುರಿಯೆಡೆಗೆ ಲಕ್ಷ್ಯವಿರಲಿ,ಗೆಲುವು ಸಂಕಲ್ಪ ಮನದಲ್ಲಿರಲಿ. ಎಲ್ಲರಿಗೂ ೨೦೧೧ನೆ ಹೊಸ ವರುಷದ ಹಾರ್ದಿಕ ಶುಭಾಶಯಗಳು.
This entry was posted on Saturday, January 1st, 2011 at 4:27 am and is filed under ಹೊಸ ವರ್ಷ-WISHESH. You can follow any responses to this entry through the RSS 2.0 feed.
You can leave a response, or trackback from your own site.