ನನ್ನ ಕ(ಜೀ)ವನಗಳು..!

1

ಮುಸ್ಸಂಜೆ ಜಾರಿತು ಸೂರ್ಯನೊಂದಿಗೆ,

ಚಂದಮಾಮ ಬಂದ ತಿಂಗಳ ಬೆಳಕಿನೊಂದಿಗೆ.

ಮೈ ಮನ ಜಾರುತಿದೆ ಸಿಹಿನಿದ್ರೆಗೆ,

ಬಾರದಿರಲಿ ವಿಘ್ನಗಳು ನಿಮ್ಮ ಕನಸಿಗೆ.

2.

ಮನಸು ಮೃದುವಾಗಿರಲಿ,
ಮಾತು ಹಿತವಾಗಿರಲಿ,
ನಡೆಯಲಿ ಸರಳತೆ ಇರಲಿ,
ಜೀವನ ಹಸನಾಗಿರಲಿ.

3.

ಸ್ನೇಹ ಸಂಕೋಲೆ ಕಳಚದಿರಲಿ ,
ನಂಬಿಕೆಗೆ ಮೊಸವಾಗದಿರಲಿ,
ಮನೆ ಮನಸುಗಳ ಸಂಬಂಧ,
ಬಹು ಜನುಮಗಳ ರುಣಾನುಬಂದ.

4.

ರಾತ್ರಿಯ  ನೀರವತೆ  ಕಳೆದಿದೆ,
ದಿನಕರನ  ಬೆಳಕು ಮೂಡಿದೆ ,
ಬದಕು ಬೆಳಗೋ ಸ್ಪೂರ್ತಿಸಿಗಲಿ,
ಸಾಧನೆಯ ಮಾರ್ಗ ಸುಗಮವಾಗಲಿ.

5

ಚುಮು ಚುಮು ಛಳಿಯಲಿ ಜಾಡ್ಯವ ಓಡಿಸಿರಿ.
ಮನವ ತೊಳೆಯಲು ದೇವರ ನಾಮವ ಧ್ಯಾನಿಸಿರಿ.
ಬದುಕಲಿ ಸ್ಪೂರ್ತಿಯ ಸೆಲೆ ಮೂಡಲೀ
ಮನೆ ಮನಸ್ಸುಗಳು ನೆಮ್ಮದಿ ಹೊಂದಲಿ.

6

ಇರುಳು ಮರಳಿ ಕಳೆದಿದೆ,
ಹಗಲು ಮತ್ತೆ ಬಂದಿದೆ,
ಹೊಸ ಬೆಳಕು ಚೆಲ್ಲಿದೆ ಜಗತ್ತಿಗೆ
ಸ್ಪೂರ್ತಿಯಾಗಲಿ ನಿಮ್ಮ ಬಾಳಿಗೆ.

—-
ವಿಶೇಷ ಸೂಚನೆ:-
ಇವೆಲ್ಲಾ ಕವಿತೆಗಳಲ್ಲಾ,ಸು(ಮನಸ್ಸಿನಿಂದ)ಮ್ಮನೆ ಬರೆದಿದ್ದು,ಅಲ್ಲಾ ಗೀಚಿದ್ದು.ಇವೆಲ್ಲಾ ಏಕಾಂಗಿ ಪಯಣದಲ್ಲಿ ಬರೆದ
ಭಾವ(ಅಭವ್ಯ)ಗೀತೆಗಳು.ಸುಮ್ಮನೆ ಓದಬೇಕು ಅಷ್ಟೇ ,ಅರ್ಥ ಹುಡ್ಕ ಬೇಡಿ.

ಧನ್ಯವಾದಗಳು.

One Response to ನನ್ನ ಕ(ಜೀ)ವನಗಳು..!

  1. Basappa says:

    very nice poem swamiji

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.