ಭಾರತದಲ್ಲಿ ಜ್ಯೋತಿಷ್ಯ ಕೇಳಿಯೇ ಮುನ್ನಡಿ ಇಡುವ ಜನರಲ್ಲಿ ಸದ್ಯ ಬಹಳಷ್ಟು ಬಹು(ಅಪ)ನಂಬಿಕೆಯುಳ್ಳ “ಮಹಾ ದೋಷ”ವೆಂದು ಕರೆಯಲ್ಪಡುವ “ಕಾಲಸರ್ಪ ಯೋಗ”ದ ಬಗ್ಗೆ ಸಾಮಾನ್ಯ ಮಾಹಿತಿ.
ಯಾವಾಗ ಎಲ್ಲ ಗ್ರಹಗಳು (೭) ರಾಹು ಮತ್ತು ಕೇತುಗಳ ನಡುವೆ ಬರುತ್ತವೆ. ಆಗ ಕಾಲ ಸರ್ಪ ಯೋಗ ವಾಗುತ್ತದೆ. ಇದರಲ್ಲಿ ೧೨ ಪ್ರಕಾರಗಳು ಇವೆ.
೧.ಅನಂತ ಕಾಲ ಸರ್ಪಯೋಗ :- ಯಾವಾಗ ರಾಹು ಲಗ್ನ ದಲ್ಲಿ ಮತ್ತು ಕೇತು ೭ನೆ ಮನೆಯಲ್ಲಿದ್ದು ಬಾಕಿ ಉಳಿದ ಗ್ರಹಗಳು ಇವುಗಳ ನಡುವೆ ಬಂದಾಗ ಅನಂತ ಕಾಲ ಸರ್ಪಯೋಗ ಉಂಟಾಗುತ್ತೆ. ಇದನ್ನು ವಿಪರೀತ ಕಾಲ ಸರ್ಪಯೋಗ ಎಂದು ಸಹ ಹೇಳುತ್ತಾರೆ.ಇದರಿಂದ ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರುವುದಿಲ್ಲ.ಹೆಚ್ಚು ಕಡಿಮೆ ಮದುವೆ ಆಗುವುದೇ ಕಷ್ಟಕರವಿರುತ್ತದೆ.ಆದರೂ ಮದುವೆ ತುಂಬಾ ಸಮಯದ ನಂತರವಾಗುತ್ತದೆ.
೨.ಕುಲಿಕ ಕಾಲ ಸರ್ಪಯೋಗ:-ಯಾವಾಗ ರಾಹು ೨ (ಧನ ಸ್ಥಾನ) ರಲ್ಲಿ ಮತ್ತು ಕೇತು ೮(ಆಯು ಸ್ಥಾನ) ರಲ್ಲಿ ಇದ್ದಾಗ ಈ ಯೋಗ ಉಂಟಾಗುತ್ತದೆ. ಈ ಯೋಗ ಹಾನಿಕಾರಕ. ಹನಿ ಹಾಗೂ ದುರ್ಘಟನೆಯ ಸಂಭವ ಹೆಚ್ಚು. ಆರ್ಥಿಕ ಚಿಂತೆ ಕಾಡುತ್ತಾ ಇರುತ್ತದೆ .
೩.ವಾಸುಕಿ ಕಾಲ ಸರ್ಪಯೋಗ:-ರಾಹು ೩ (ಪರಾಕ್ರಮ ಸ್ಥಾನ ) ರಲ್ಲಿದ್ದು ಕೇತು ೯ (ಭಾಗ್ಯ ಸ್ಥಾನ ) ರಲ್ಲಿದ್ದಾಗ ಉಂಟಾಗುವ ಯೋಗ. ಉದ್ಯೋಗಮತ್ತು ವ್ಯಾಪಾರ ಸಂಭದಿತ ಸಮಸ್ಯೆಗಳು ಹೆಚ್ಚು.
೩.ವಾಸುಕಿ ಕಾಲ ಸರ್ಪಯೋಗ:-ರಾಹು ೩ (ಪರಾಕ್ರಮ ಸ್ಥಾನ ) ರಲ್ಲಿದ್ದು ಕೇತು ೯ (ಭಾಗ್ಯ ಸ್ಥಾನ ) ರಲ್ಲಿದ್ದಾಗ ಉಂಟಾಗುವ ಯೋಗ. ಉದ್ಯೋಗಮತ್ತು ವ್ಯಾಪಾರ ಸಂಭದಿತ ಸಮಸ್ಯೆಗಳು ಹೆಚ್ಚು.
೪.ಶಂಕಪಾಲ ಕಾಲ ಸರ್ಪಯೋಗ :-ರಾಹು ೪ (ಸುಖ ಸ್ಥಾನ ) ರಲ್ಲಿ ಕೇತು ೧೦ ನೇ (ಕಾರ್ಯ ಸ್ಥಾನ) ರಲ್ಲಿದ್ದು ಇವುಗಳ ಗ್ರಹಗಳು ಇದ್ದಾಗ ಉಂಟಾಗುವ ಯೋಗವಿದು.ಕೆಲಸ ಕಾರ್ಯಗಳಲ್ಲಿ ವಿಘ್ನ,ವ್ಯವಹಾರ ದಲ್ಲಿ ಮೋಸಹೋಗುವ ಸಂಭವ ಹೆಚ್ಚು.ಮಕ್ಕಳಂತೆ ವರ್ತನೆ.(This yoga also has power of conferring high political success and windfull gains )
೫.ಪದ್ಮ ಕಾಲ ಸರ್ಪಯೋಗ:- ರಾಹು ೫ (ಪುತ್ರ ವಿಧ್ಯಾ ಸ್ಥಾನ) ರಲ್ಲಿ ಕೇತು ೧೧ (ಲಾಭ) ರಲ್ಲಿದ್ದಾಗ ಉಂಟಾಗುವ ಯೋಗ. ಸಂತಾನ ಪ್ರಾಪ್ತಿಯಲ್ಲಿ ವಿಳಂಬ ಅಥವಾ ತುಂಬಾ ಕಷ್ಟಕರವಾದ ಸಂಯೋಗ ಸ್ನೇಹಿತರಿಂದ ಹಾನಿ.
೬.ಮಹಾ ಪದ್ಮಕಾಲ ಸರ್ಪಯೋಗ:-ರಾಹು ೬ (ಶತ್ರು) ರಲ್ಲಿ ,ಕೇತು ೧೨ ರಲ್ಲಿದ್ದಾಗ(ವ್ಯಯ) ಉಂಟಾಗುವ ಯೋಗ. ಇದರಿಂದ ಆರೋಗ್ಯದಲ್ಲಿ ವ್ಯತ್ಯಾಸ , ಶತ್ರು ಕಾಟ, ರಾಜಕೀಯವಾಗಿ ಯಶಸ್ಸು.
೭.ತಕ್ಷಕ ಕಾಲ ಸರ್ಪಯೋಗ :- ರಾಹು ೭ (ಕಾಲತ್ರ) ರಲ್ಲಿ, ಕೇತು ೧ (ಲಗ್ನ) ರಲ್ಲಿದ್ದಾಗ ಉಂಟಾಗುವ ಯೋಗ. ಪಾಲುದಾರಿಕೆ(partnership) ವ್ಯವಹಾರ ಗಳಲ್ಲಿ ಹಾನಿ.ಮದುವೆಯಲ್ಲಿ ವಿಳಂಬ.ಸಾಮರಸ್ಯ ರಹಿತ ಜೀವನ.
೮.ಕಾರ್ಕೋಟಕ ಕಾಲ ಸರ್ಪಯೋಗ :- ರಾಹು ೮ (ಆಯು),ಕೇತು ೨ (ಧನ) ರಲ್ಲಿದ್ದಾಗ ಈ ಯೋಗ ಉಂಟಾಗುತ್ತದೆ. ಅತೀ ಉದ್ವೇಗ,ಬಹುಮಂದಿ ಶತ್ರು ಕಾಟ ,ಸಮಾಜ ವಿಧ್ರೋಹಿಗಳ ಜೊತೆ ಸ್ನೇಹ, ಪ್ರಗತಿಯಲ್ಲಿ ಕುಂಟಿತ.
೯.ಶಂಕುಚುಡಾ kala ಸರ್ಪಯೋಗ :-ರಾಹು ೯ (ಭಾಗ್ಯ) ರಲ್ಲಿ, ೩ (ಪರಾಕ್ರಮ) ಇದ್ದಾಗ ಈ ಯೋಗವಾಗುತ್ತದೆ. ಜೀವನದಲ್ಲಿ ಏರಿಳಿತ , ಒಳ್ಳೆಮಾತುಗರಿಕೆ ಹಾಗೂ ಕೋಪಿಷ್ಠ ಸ್ವಭಾವ ಉಳ್ಳವರಾಗಿರುತ್ತಾರೆ.ಉನ್ನತ ಅಧಿಕಾರಿಗಳೊಂದಿಗೆ ವೈಮನಸ್ಸು ಇರುತ್ತದೆ.
೧೦.ಘಾತಕ ಕಾಲ ಸರ್ಪಯೋಗ :-ರಾಹು ೧೦ (ಕಾರ್ಯ)ರಲ್ಲಿ, ಕೇತು ೪ (ಸುಖ) ರಲ್ಲಿ ಇದ್ದಾಗ ಈ ಯೋಗ ಉಂಟಾಗುತ್ತದೆ. ನ್ಯಾಯಾಂಗದಿಂದ ಶಿಕ್ಷೆ ಸಂಬವ, ಸಂಯೋಜನೆಯಲ್ಲಿ, ಉದ್ಯೋಗದಲ್ಲಿ ಏರಿಳಿತ.
೧೧.ವಿಷಧರ ಕಾಲ ಸರ್ಪಯೋಗ :- ರಾಹು ೧೧ (ಲಾಭ)ರಲ್ಲಿ, ಕೇತು ೫(ಪುತ್ರ ಸ್ಥಾನ)ರಲ್ಲಿ, ಇದ್ದಾಗ ಈ ಯೋಗ ವಾಗುತ್ತದೆ.ಸದಾ ಸಂಚಾರ ಯೋಗ, ಚಂಚಲ ಪ್ರವೃತ್ತಿ,ಸಂತಾನ ವಿಷಯದಲ್ಲಿ ಸಮಸ್ಸೆ ,ಹೃದಯ ಸಂಭಂದಿ ರೋಗ ಸಮಸ್ಸೆ, ಒಂದು ಜಾಗದಲ್ಲಿ ಸ್ಥಿರವಿರುವುದಿಲ್ಲ, ಮದ್ಯ ಜೀವನದಲ್ಲಿ ಶಾಂತಿ ಅನುಭೂತಿ ಹೊಂದುತ್ತಾರೆ.
೧೨.ಶೇಷ ನಾಗ ಕಾಲ ಸರ್ಪಯೋಗ:-ರಾಹು ೧೨ (ವ್ಯಯ)ರಲ್ಲಿ, ಕೇತು ೬ ರಲ್ಲಿ ಇದ್ದಾಗ ಈ ಯೋಗ ಉಂಟಾಗುತ್ತದೆ. ಶತ್ರುಗಳ ಕಾಟ, ಆರೋಗ್ಯದಲ್ಲಿ ಸಮಸ್ಯೆ ,ಅಜ್ಞಾತ ಶತ್ರುಗಳಿಂದ ಕಾಟ.
ಕಾಲ ಸರ್ಪ ಯೋಗ ಅಧ್ಯಯನ ಮಾಡುವ ಮೊದಲು ಕೆಲವು ಮುಖ್ಯ ಅಂಶಗಳ ಕಡೆ ಗಮನಿಸಬೇಕು….
೧.ಎಲ್ಲಾ (೭) ಗ್ರಹಗಳು ರಾಹು-ಕೇತುಗಳ ನಡುವೆ ಇರಬೇಕು.
೨.ಅಕಸ್ಮಾತ್ ಒಂದು ಗ್ರಹವು ಹೊರಗೆ ಇದ್ದರೆ ಈ ಯೋಗ ಭಂಗವಾಗುತ್ತದೆ.
೩.ಕಾಲ ಸರ್ಪಯೋಗ ಯಾವಾಗಲು ಕೆಟ್ಟದ್ದಲ್ಲ.ಅದು ಒಳ್ಳೆಯದನ್ನು ತಿಳಿಸುತ್ತದೆ.
೪.ರಾಹು-ಚಂದ್ರನಿಂದ ಉತ್ತರ ನೋಡ್(node) ,ಕೇತು-ಚಂದ್ರನಿಂದ ದಕ್ಷಿಣ ನೋಡ್(node) ಇದ್ದಾಗ ಮಾತ್ರ ಈ ಸಂಯೋಗ.
೧.ಎಲ್ಲಾ (೭) ಗ್ರಹಗಳು ರಾಹು-ಕೇತುಗಳ ನಡುವೆ ಇರಬೇಕು.
೨.ಅಕಸ್ಮಾತ್ ಒಂದು ಗ್ರಹವು ಹೊರಗೆ ಇದ್ದರೆ ಈ ಯೋಗ ಭಂಗವಾಗುತ್ತದೆ.
೩.ಕಾಲ ಸರ್ಪಯೋಗ ಯಾವಾಗಲು ಕೆಟ್ಟದ್ದಲ್ಲ.ಅದು ಒಳ್ಳೆಯದನ್ನು ತಿಳಿಸುತ್ತದೆ.
೪.ರಾಹು-ಚಂದ್ರನಿಂದ ಉತ್ತರ ನೋಡ್(node) ,ಕೇತು-ಚಂದ್ರನಿಂದ ದಕ್ಷಿಣ ನೋಡ್(node) ಇದ್ದಾಗ ಮಾತ್ರ ಈ ಸಂಯೋಗ.
ಪರಿಹಾರ:-
ಮಂತ್ರೋಚ್ಚರ(ಜಪ),ತೀರ್ಥ ಯಾತ್ರೆ.ಇತ್ಯಾದಿ
ಮಂತ್ರೋಚ್ಚರ(ಜಪ),ತೀರ್ಥ ಯಾತ್ರೆ.ಇತ್ಯಾದಿ
ಬಹಳ ದಿನಗಳ ಸಂಪರ್ಕದ ನಂತರ ತಮ್ಮ ಭೇಟಿ ಹಾಗೂ ನಿಮ್ಮ ಬರಹಗಳನ್ನು ಓದಿ ಅತೀವ ಸಂತಸವಾಯಿತು. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆ ತಾವು ಇದುವರೆಗೆ ಬರೆದಿರುವ ಸುಮಾರು 22 ರಚನೆಗಳನ್ನು ಓದುತ್ತಾ ಹೋದಂತೆ ವಿಶಿಷ್ಟ ಅನುಭವವುಂಟಾಯಿತು. ತಮ್ಮಿಂದ ಇನ್ನಷ್ಟು ಬರಹಗಳನ್ನು ನಿರೀಕ್ಷಿಸುತ್ತಾ, ನಮಸ್ಕಾರಗಳೊಡನೆ