ಪರೋಪಕಾರಾಯ ಫಲಂತಿ ವೃಕ್ಷ |ಪರೋಪಕಾರಾಯ ವಹಂತಿ ನದ್ಯ|
ಪರೋಪಕಾರಾಯ ದುಹಂತಿ ಗಾವ|ಪರೋಪಕಾರರ್ಥಮಿದಂ ಶರೀರಂ ||
ಜೈನ ಧರ್ಮದ ಅನುಯಾಯಿಗಳಿಗೆ ದಶಲಕ್ಷಣ ಪರ್ವವು(ಭಾದ್ರಪದ ಶು.೫ಯಿಂದ ೧೪ ಯವರಿಗೆ ) ಮುಗಿದ ಮರುದಿನ ಎಲ್ಲಾ ಜೀವಿಗಳಲ್ಲೂ (ಪರಸ್ಪರ ಮನುಷ್ಯರಲ್ಲಿ ಮೊದಲು )ಮನ ವಚನ ಹಾಗೂ ಕಾಯ(ಕೈ ಜೋಡಿಸಿ )ಗಳಿಂದ ಕ್ಷಮೆ (ಕ್ಷಮಾ ವಾಣಿ ) ಕೇಳುವುದು ರೂಢಿ.ಕ್ಷಮೆಯನ್ನು ಕೇಳೋದರಿಂದ ಯಾರೂ ಸಹ ಚಿಕ್ಕವರಾಗುವುದಿಲ್ಲ,ಅಥವಾ ಕ್ಷಮೆ ಕೇಳೋದರಿಂದ ದೊಡ್ಡತನಕ್ಕೆ ದಕ್ಕೆ ಬರುವುದಿಲ್ಲಾ..|
ಕ್ಷಮೆ ಮನುಷ್ಯನ ಸ್ವಭಾವ ,ಕ್ರೋಧ(ಸಿಟ್ಟು) ವಿಕಾರ ಪರಿಣಾಮ .ಹೇಗೆಂದರೆ ನೀರಿನಲ್ಲಿ ಶೀತಲತೆಯ ಸ್ವಭಾವವಿದೆ,ಆದರೆ ಉಷ್ಣದ ನಿಮಿತ್ತದಿಂದ ಅದು ಬಿಸಿಯಾಗುತ್ತದೆ ಹಾಗೆಯೇ,ಈ ಜೀವ ಪರ ನಿಮಿತ್ತದಿಂದ ಕೋಪದ ಸ್ಥಿತಿಗೆ ತಲುಪುತ್ತದೆ.ಅದು ನಮ್ಮ ಸ್ವಭಾವವಲ್ಲಾ.ಎಂತಹ ಸ್ಥಿತಿಯೇ ಬರಲಿ ಆ ಸಮಯದಲ್ಲಿ ನಮ್ಮ ವಿವೇಕವನ್ನು ಬಳಸಬೇಕು ,ಸಮಯೋಚಿತ ನಿರ್ಣಯ ತೆಗೆದುಕೊಳ್ಳಬೇಕು.ವಿನಾಕರಣ ಇನ್ನೊಬ್ಬರ ಮೇಲೆ ದ್ವೇಷ ಬೆಳೆಸೋದರಿಂದಾ ಪ್ರಯೋಜನವಿಲ್ಲ .ಅದರಿಂದಾ ನಮ್ಮ ಸಮಯ,ಮನಸ್ಸಿನ ಶಾಂತಿಯ ಭಂಗ ಆಗುತ್ತದೆ.
ಕ್ಷಮಾ ವೀರಸ್ಯ ಭೂಷಣಂ,
ವೈರದಿಂದ ಗೆಲ್ಲಲಾಗದನ್ನು ಮೈತ್ರಿಯಿಂದ ಗೆಲ್ಲಬಹುದು.
ಭೀತಿಯಿಂದ ಮಾಡದ ಸಾಧನೆ ಪ್ರೀತಿಯಿಂದ ಮಾಡಬಹುದು .
ಒಮ್ಮೆ ಪ್ರಯತ್ನಿಸಿ …..! 
ಈ ವಾಕ್ಯವನ್ನು ಬರೆದು ತುಂಬಾ ದಿನಗಳಾದರೂ ಯಾವುದೇ ರೀತಿಯ ಒಂದು ಉದಾಹರಣೆ ನನಗೆ ಕೊಡಲು ಸಾಧ್ಯವಾಗಿರಲಿಲ್ಲ .ಆದ್ರೆ ನಾ ಇವತ್ತು ದಟ್ಸ್ ಕನ್ನಡ.ಕಾಂನಲ್ಲಿ ಮಣಿಕಾಂತರು “ಕೈ ಇಲ್ಲ, ಕಾಲಿಲ್ಲ, ಚಿಂತೆನೂ ಇಲ್ಲ”ಎಂಬಾ
ನಿಕ್ ಜಿಸಿಕ ನ ಬಗ್ಗೆ ಬರೆದ ಲೇಖನವನ್ನು ಓದಿ ಮುಗಿಸಿದ ನಂತರ ಕಣ್ಣಂಚಲಿ ಹನಿ ಜಿನಿಗಿತು.ಹಾಗೆ ಜೊತೆಗೆ ಸಾಧನೆಗೆ ಕೈ -ಕಾಲುಗಳ ಪಾಲು ಎಷ್ಟೆಂಬುದು ತಿಳಿಯಿತು .ಮನಸ್ಸಿದರೆ ಮಾರ್ಗ ,ಆನ್ನೋ ನಾಣ್ಣುಡಿ ಎಷ್ಟು ಸಾರ್ಥಕ ಆಲ್ವಾ ?
ಜೀವನದಲ್ಲಿ ಸಾಧಿಸುವ ಛಲವಿದ್ದರೆ ಬೆಟ್ಟವನ್ನು ಕರಗಿಸಬಹುದು.ಹುಟ್ಟಿಂದ ಕೈ-ಕಾಲುಗಳ ಪರಿಚಯವಿಲ್ಲದೆ ಬೆಳೆದ ನಿಕ್ ಜೆಸಿಕ್ ಬೆಳೆದ ರೀತಿ ವಿಸ್ಮಯ ..
ಪ್ರಪಂಚದಲ್ಲಿ ಕೈ-ಕಾಲುಗಳು ಚೆನ್ನಾಗಿ ಇದ್ದೂ ಸಹ ದುಡಿಯದೆ ಅಥವಾ ಸಾಧಿಸುವ ಪ್ರಯತ್ನ ಪಡದೆ ಕೊರಗುವರು ,ಕೂಗಾಡುವವರ ಸಂಖ್ಯೆಗೇನೂಕಡಿಮೆ ಇಲ್ಲಾ ಬದುಕುವ ಆಸೆ ಜೊತೆಗೆ ಸಾಧಿಸೋ ಛಲ ಇದ್ದರೆ ,ನಾವು ತಲುಪ ಬೇಕು ಎಂದಿರುವ ಗುರೀ ದೂರವಿರದು.
ಮನಸ್ಸಿನ ಕೈಗೆ ಬುದ್ದಿ ಕೊಡದೆ,ಬುದ್ದಿಯಾ(ವಿವೇಕ)ಕೈಯಲ್ಲಿ ಅದನ್ನು ನಿಯಂತ್ರಿಸಿದರೆ ಅರ್ಧ ದಾರೀ ಸುಗಮ.ಮನುಷ್ಯನನ್ನು
ಶರೀರದ (ಅಂಗ)ವಿಕಲತೆಗಿಂತಾ ,ಮಾನಸಿಕ ವಿಕಲತೆ ಹೆಚ್ಚು ಕಾಡುತ್ತದೆ .ಏಕೆಂದರೆ ಅಂಗಾಂಗಗಳಿಗೆ ಕೆಲಸವನ್ನು ಸೂಚಿಸುವುದೇ ಮನಸು .ಆಗ ಅವು ಕಾರ್ಯ ನಿರ್ವಹಿಸುತ್ತವೆ .ಆದ್ರೆ ಎಲ್ಲ ನಿಯಂತ್ರಣ ಮಾತ್ರ ಮನಸ್ಸಿನ ಕೈಯಲ್ಲಿ ಇರುತ್ತದೆ .ಈ ಮನಸ್ಸನ್ನು ನಿಯಂತ್ರಿಸುವುದು ನಮ್ಮ ವಿವೇಕ.ಯಾವುದನ್ನು ಮಾಡಬೇಕು ,ಏನನು ಮಾಡ ಬಾರದು ಎಂದು ಸದಾ ಜಾಗೃತೆ ಮೂಡಿಸೋದು ವಿವೇಕ.
ಮನಸ್ಸನ್ನು ಶುದ್ಧವಾಗಿ ಸದಾ . ಇದರ ಬಗ್ಗೆ ಮುಂದೆ ಬರೆಯುತ್ತೇನೆ ..
ನಿಕ ಜಿಸಿಕ್ ಬಗ್ಗೆ ಓದ ಬೇಕಾದ್ರೆ ಕ್ಲಿಕ್ ಮಾಡಿ —
http://thatskannada.oneindia.in/column/manikanth/2008/0904-nick-vujicic-no-limbs-no-legs-no-worries.html

ಭಾದ್ರಪದ ಮಾಸದ ಶುಕ್ಲ ಪಂಚಮಿ ಇಂದಾ ಪೂರ್ಣಿಮೆ ಯವರೆಗೆ ದಿಗಂಬರ ಜೈನ ಧರ್ಮದವರಿಗೆ.ಈ ಹತ್ತು ದಿನಗಳು ಪೂಜೆ ,ಸ್ವಾದ್ಯಾಯ ,ಹಾಗು ಉಪವಾಸ ವ್ರತಗಳನ್ನು ಮಾಡುವ ಮೂಲಕ ಶ್ರಾವಕ ,ಶ್ರಾವಕಿಯರು ಪುನ್ಯಾರ್ಜನೆ ಮಾಡಿ ಕೊಳ್ಳುತ್ತಾರೆ..|