ಶುಭ ಸಂಕಲ್ಪ

January 12, 2012

ಒಂದು ವರುಷ ಕಳೆದಿದೆ.ದಿನಗಳು,ತಿಂಗಳುಗಳು ಗತಿಸಿ ಕ್ಯಾಲೆಂಡರ್ ಬದಲಾಗುವುದೇ ಕಾಲ ಪರ್ವರ್ತನೆಯಲ್ಲ.ಈ ಒಂದು ವರುಷದ ಒಡಲೊಳಗೆ ನಮ್ಮ ಜೀವನದ ಅತಿ ದೊಡ್ದದಲ್ಲವಾದರೂ ಅತಿ ಚಿಕ್ಕದಾದರೂ ಮಹತ್ವ ಪೂರ್ಣ ಘಟ್ಟವನ್ನು ನಾವುಗಳು ದಾಟಿರುತ್ತೇವೆ.ಇದು ನಮಗೆ ಹಿಂದಿನ ದಿನಗಳ ಮೆಲುಕು ಹಾಕುವುದರ ಜೊತೆಗೆ ಮುಂದಿನ  ದಿನಗಳ ತಯಾರಿಗೆ ಅನುಕೂಲವಾಗುತ್ತದೆ.ಹೊಸ ವರುಷವು ನಮ್ಮನ್ನು ಸ್ವಾಗತಿಸಿದ ಕಾತರದಲ್ಲಿದ್ದರೆ ಕಳೆದ ವರುಷದ ನಿರ್ಗಮನ  ನಮ್ಮನ್ನು ಸಮೀಕ್ಷೆಗೆ ಒಳಪಡಿಸಿದೆ.
ನಿರ್ಗಮನ ಮತ್ತು ಆಹ್ವಾನಗಳ ಈ ಸಂಗಮ ಸಮಯದಲ್ಲಿ, ಹಿಂದಿನ ಅಪೂರ್ಣವಾದ ಹಾಗೂ  ಭವಿಷ್ಯಕ್ಕೆ  ಹೊಸ ಸಂಕಲ್ಪಗಳನ್ನು ಮನುಷ್ಯನು ಮಾಡುವ ಸನ್ನಿಹಿತ ಕ್ಷಣವಾಗಿದೆ.ಅಗಣಿತ-ಅಪರಿಮಿತ ಕನಸುಗಳನ್ನು ಮನುಷ್ಯನು ಸಂಕುಚಿತ ಮನಸ್ಸಿನಲ್ಲಿ ಅದುಮಿಟ್ಟುಕೊಂಡು,ಬದುಕು ಸಾಗಿಸಲು ಪ್ರಯತ್ನಿಸಿರುತ್ತಾನೆ.ಸಂಕಲ್ಪಗಳು-ವಿಕಲ್ಪಗಳಾಗಿ ಪರಿಣಮಿಸಿ ನಿಂತಲ್ಲೇ ಸ್ತಬ್ದನಾಗಿರುವಂತೆ ಮಾಡಿರುತ್ತವೆ.ಇಚ್ಛಾಶಕ್ತಿಯ ಕೊರತೆ,ಸಾರ್ಥಕ ಪ್ರಯತ್ನದಲ್ಲಿ ವಿಫಲತೆಯಿಂದಾಗಿ  ಮುನ್ನಡೆ ಕಾಣದಂತೆ ಬದುಕುತಿರುತ್ತೇವೆ.ಭುವಿಯ ಮೇಲಿರುವ ಎಲ್ಲಾ ಸಂಕಟಗಳು ನಮ್ಮ ತಲೆಯ ಮೇಲಿರುವಂತೆ ಭಾವಿಸುತ್ತಾ ಮನ(ಣ)ಭಾರ ಅನುಭವಿಸುತ್ತೇವೆ.

ಮನುಷ್ಯನ ವಿವೇಕಯುಕ್ತನಾಗಿದ್ದರು,ಅದನ್ನು ಸರಿಯಾಗಿ ಬಳಸದೇ ಇದ್ದುದರಿಂದ ದುಃಖಿಯಾಗಿ ನರಳುತ್ತಾನೆ.ಮನುಷ್ಯನಿಗೆ ಜೀವನವನ್ನು ಬೆಳಗಿಸಿಕೊಳ್ಳಲೆಂದೇ ಮೂರು ಪ್ರಮಾಣ(ಅಳತೆ)ಗಳಿವೆ.೧.ಅನುಭೂತಿಗಾಗಿ ಹೃದಯ ೨.ಚಿಂತನೆ ಮತ್ತು ಕಲ್ಪನೆಗೆಂದು ಮೆದುಳು(ಬುದ್ದಿ)ಹಾಗೂ ೩.ಕೆಲಸ ಮಾಡಲೆಂದೇ ಕೈಗಳು.ಆದರೆ ಹೃದಯವಿದ್ದು ಪವಿತ್ರವಿಲ್ಲಾ,ಬುದ್ದಿಯಿದ್ದರೂ ಒಳ್ಳೆಯ ನಿರ್ಣಯ ತೆಗೆದುಕೊಳ್ಳುವಂತ ವಿವೇಕ ಜಾಗೃತಿಯಿಲ್ಲಾ,ಹಾಗೂ ಶಕ್ತಿಯುತ ಕೈಗಳಿದ್ದರೂ ಕ್ರಿಯಾಶೀಲವಾಗಿಲ್ಲ.ಹೀಗಿದ್ದಾಗ ಜೀವನದ ಸಾರ್ಥಕ ಪಯಣ ಅಪೂರ್ಣವಲ್ಲವೇ?

ಹೃದಯ ಪವಿತ್ರತೆಗಾಗಿ,ಸಂಕಲ್ಪ ಸಿದ್ದಿಗಾಗಿ ವಿವೇಕ ಜಾಗೃತಿಯೊಂದಿಗೆ,ಮನ,ವಚನ,ಕಾಯಗಳ ತ್ರಿಕರಣ ಶುದ್ದಿಯೊಂದಿಗೆ ಭಗವಂತನ ಪ್ರಾರ್ಥನೆ ಮಾಡಬೇಕು.ಭಗವಂತನ ಕೃಪೆಗೆ ಪಾತ್ರರಾಗಬೇಕೆಂದರೆ “ಪ್ರಾರ್ಥನೆ” ಸಹಕಾರಿಯಾಗಬಲ್ಲದು.

ಇಂದಿನ ವಿಷಮ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ನಾವುಗಳು ಮನುಷ್ಯ-ಮನುಷ್ಯರ ನಡುವೆ ಸಂಪೂರ್ಣ ಅಂತರ್ದೃಷ್ಟಿ ಮತ್ತು ಸಂವೇದನೆಯ ಜೊತೆಗೆ,ಮಾನವೀಯ ಮೂಲ್ಯಗಳ ಪುನರ್ಸ್ಥಾಪನೆ ಮತ್ತು ಧಾರ್ಮಿಕ,ರಾಜನೈತಿಕ,ಸಾಮಾಜಿಕ ಮತ್ತು ಚಾರಿತ್ರಿಕ ಕ್ರಾಂತಿಗಳ ಅವಶ್ಯಕತೆಯಿದೆ.ಮಾನಸಿಕ ಪಟಲಕ್ಕೆ ಅಂಟಿರುವ ಕುಸಂಸ್ಕಾರಗಳನ್ನು ಅಳಿಸಿ ಉತ್ತಮ ಸಮಾಜ ನಿರ್ಮಾಣವಾಗಬೇಕಿದೆ.ಮನುಷ್ಯ ತನ್ನ ಉತ್ಸಾಹ ಮತ್ತು ಸಂಕಲ್ಪಶಕ್ತಿಯ ಜೊತೆಗೆ ಮುಂದೆ ಸಾಗಿದರೆ ವರ್ತಮಾನದಲ್ಲಿ ಹತಾಶೆಗಳಿಂದ ನಿವೃತ್ತಿಯಾಗಿ ಹೊಸ ಬೆಳಕಿನ ಆಸರೆಯಲ್ಲಿ ನಡೆಯಬಹುದು.

ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ    ಶುಭಾಶಯಗಳು


ಗುರಿಯಿದ್ದರೆ ಗೆಲುವು

January 1, 2011

ಮತ್ತೊಂದು ವರುಷ ನಮ್ಮ ಕಣ್ಣೆದುರೇ ಕಳೆದು(ಮುಗಿದು)ಹೋಗಿದೆ.ನಮ್ಮ ಜೀವನದ ಅಮೂಲ್ಯ ಕ್ಷಣಗಳು,ಮರೆಯಲಾರದ ದಿನಗಳು ಪದೇ-ಪದೇ ಅನುಭವಕ್ಕೆ ಬರುವ ಮಧುರ ಸವಿ ನೆನಪುಗಳು ಈ ಕಾಲ(ವರ್ಷ)ದ ಒಳಗೆ ಅಡಗಿ ಹೋಗಿವೆ.
ನಮಗೆ ತಿಳಿದು-ತಿಳಿಯದೇ ಕಾಲದ ವಶಕ್ಕೆ ನಾವುಗಳು ಒಳಗಾಗುತ್ತೇವೆ.ನಮ್ಮ ದೈನಂದಿನ ಚರ್ಯೆಗಳು ನಿಂತರೂ,ಕಾಲವು ಅದಕ್ಕೆ ಕಾಯದೆ ತನ್ನ ಗತಿಯನ್ನು ತೀವ್ರಗೊಳಿಸುತ್ತಾ ಮುಂದುವರಿಯುತ್ತದೆ.ಮತ್ತೊಮ್ಮೆ ಆ ಕಾಲವು ಮರಳಿ ಬಾರದು.
ಜೀವನದಲ್ಲಿ ಅನೇಕ ಸಂಘರ್ಷಗಳನ್ನು ನಾವು ಗೆಲ್ಲಲು ಅನೇಕ ಪ್ರಯತ್ನಗಳನ್ನು ನಡೆಸಿರುತ್ತೇವೆ.ಅದರಲ್ಲಿ ಕೆಲವೊಮ್ಮೆ ನಾವುಗಳು ಪರಾಜಿತರಾಗಿದ್ದರು,ಅವುಗಳನ್ನು ಮರೆಸುವಂತಾ ಗೆಲುವು ನಮ್ಮನ್ನು ಸಮಾಧಾನಿಸಲು ನೆರವಾಗುತ್ತದೆ.
“ಸೋಲೇ ಗೆಲುವಿನ ಸೋಪಾನ”ಎಂಬ ನಾನ್ನುಡಿಯಿದೆ.ಅದನ್ನು ಸಾಧಿಸಲು ಆತ್ಮ ವಿಶ್ವಾಸವನ್ನು ಕಳೆದುಕೊಳ್ಳದೆ ಮುನ್ನುಗ್ಗಬೇಕು ಅಷ್ಟೇ.
ಆತ್ಮ ವಿಶ್ವಾಸವೊಂದೆ ಜೀವನದ ಸಂಘರ್ಷಗಳನ್ನು  ಗೆಲ್ಲಲು ಇರುವ ಸಿದ್ದಿ ಮಂತ್ರ.ಪ್ರತಿ ದಿನ ಗೆಲುವಿನ ಕ್ಷಣಗಳನ್ನು ನೆನೆಯುತ್ತಾ  ಮತ್ತೊಂದು ಮಹತ್ವ ಪೂರ್ಣ ಗೆಲುವಿನ ಕಡೆ ನಮ್ಮ ಹೆಜ್ಜೆ ಹಾಕಬೇಕು.ಗುರಿಯ ಕಡೆ ಲಕ್ಷ್ಯವಿದ್ದರೆ ಗೆಲುವು ಸಾಧ್ಯ..!!!
ನಮ್ಮ ಜೀವನದ ಅನೇಕ ಗುರಿಗಳನ್ನು ತಲುಪಬೇಕಿದೆ,ಹಾಗಾಗಿ ನಮ್ಮ ನಡೆ(ಹೆಜ್ಜೆ) ನಿರಂತರ ಸಾಗಬೇಕಿದೆ.ಎಲ್ಲಾ ಅಡೆ ತಡೆಗಳನ್ನು ದೂರ ಮಾಡಿಕೊಂಡು,ನಮ್ಮ ಪ್ರಯತ್ನದಲ್ಲಿ ಸಾಧನೆ ಮಾಡಬೇಕಿದೆ.
ನಡೆ ಸಾಗಲಿ ನಿರಂತರ…!!
ಪ್ರತಿ ವರುಷದಂತೆ ಇದ್ದರು,ಇದರಲ್ಲಿ ಅನೇಕ ಅವಕಾಶಗಳು ನಮಗಾಗಿ ಕಾದಿವೆ,ಅವುಗಳನ್ನು ಹುಡುಕಿ ತೆಗೆಯುವ ಪ್ರಯತ್ನ ಮಾಡುವ ಸಂಕಲ್ಪ ಮತ್ತೊಮ್ಮೆ ಮಾಡುವ.
ಗುರಿಯೆಡೆಗೆ ಲಕ್ಷ್ಯವಿರಲಿ,ಗೆಲುವು ಸಂಕಲ್ಪ ಮನದಲ್ಲಿರಲಿ.
ಎಲ್ಲರಿಗೂ ೨೦೧೧ನೆ ಹೊಸ ವರುಷದ ಹಾರ್ದಿಕ ಶುಭಾಶಯಗಳು.

ಗೆಲುವು ನಿಮ್ಮದಾಗಲಿ.


ಪರಿಪೂರ್ಣ ದೀಪಾವಳೀ

November 19, 2010


ದೀಪಾವಳೀ ಹಬ್ಬದ ಶುಭಾಶಯಗಳು

ದೀಪ ಹಚ್ಚಿ ಹೊರಗಿನ ಕತ್ತಲೆಯನ್ನು ದೂರ ಮಾಡುವ ಪ್ರಯತ್ನ ಮಾಡುತ್ತೇವೆ.ಮನುಷ್ಯನಿಗೆ
ಕತ್ತಲೆ ಇಡಿಸುವುದಿಲ್ಲ,ಸದಾ ಬೆಳಕಿನೊಂದಿಗೆ ಜೀವನ ಸಾಗಿಸಲು ಇಚ್ಚಿಸುತ್ತಾನೆ.ಜೀವನದ
ಅಮೂಲ್ಯ ವಸ್ತುಗಳನ್ನು ಹುಡುಕಲು ಬೆಳಕು ಬೇಕು.ಹಾಗೆಯೇ ನಮ್ಮ ಮನಸ್ಸಿನಲ್ಲಿ ಇರುವ
ಮೌಡ್ಯ ರೂಪದ ಕತ್ತಲೆಯನ್ನು ದೂರ ಮಾಡಲು ಮನುಷ್ಯ ಜ್ಞಾನದ ಆಸರೆಯನ್ನು ಬಯಸುತ್ತಾನೆ.ಆ
ಜ್ಞಾನವು ಶಾಸ್ತ್ರಗಳಲ್ಲಿ ಇರಬಹುದು,ಅಥವಾ ಒಬ್ಬ ಉತ್ತಮ ಗುರುಗಳ ಬಳಿ
ಸಿಗಬಹುದು.

ಪ್ರಪಂಚದಲ್ಲಿ ಪರಿಪೂರ್ಣ ಮನುಷ್ಯನಿಲ್ಲ.ಹಾಗೇನಾದರು ಇದ್ದರೇ ಆತ ಮನುಷ್ಯನೇ ಅಲ್ಲಾ,”ದೇವರು”ಇರಬಹುದು.ಏಕೆಂದರೆ ಏನನ್ನಾದರು(ನೆಮ್ಮದಿ,ಶಾಂತಿ,ಅಥವಾ ಮುಕ್ತಿ ಇತ್ಯಾದಿ)ನಾವು ಹುಡುಕುತ್ತಾ ಇದ್ದೇವೆ ಅಂದರೆ ನಮ್ಮಲ್ಲಿ ಇನ್ನೂ “ಬೇಕು”ಗಳು ಇದ್ದಾವೆ,ಅವುಗಳ ಪೂರ್ತಿಗಾಗೆ ಈ ಭುವಿಯಲ್ಲೇ ಇದ್ದೇವೆ,ಅವುಗಳ ಪೂರ್ಣತೆಯಾದಗಲೇ ನಾವು “ಪರಿಪೂರ್ಣ”ರು(ದೇವರು).ಪರಿಶ್ರಮ(ಪುರುಷಾರ್ಥ)ವಿಲ್ಲದೆ ಪರಿಪೂರ್ಣತೆಯಿಲ್ಲ.

ಪರಿಪೂರ್ಣತೆ ಹೊಂದಲು ಮನದಲ್ಲಿ ಜ್ಞಾನ ಜ್ಯೋತಿಯನ್ನು ಬೆಳೆಗಿಸಬೇಕು.ಆಗಲೇ ನಮ್ಮ ಮೌಡ್ಯತೆಗಳನ್ನು ದೂರಮಾಡಲು ಸಾಧ್ಯವಿದೆ.ಇದು ದೂರವಾದಮೇಲೆ “ಬೇಕು”ಗಳಿಗೆ ಅಂತ್ಯ ಗೀತೆ.ಆಗಲೇ ನಿಜವಾದ ದೀಪಾವಳಿ ಆಗುವುದು.ಸದಾ ಆನಂದಮಯ,ಸುಖಮಯ ಜೀವನ ನಮ್ಮದಾಗುವುದು.
ನಿತ್ಯ ಜ್ಯೋತಿರ್ಮಯ ಜೀವನ ನಮ್ಮದಾಗಲಿ.

 

 

ದೀಪವ ಬೆಳಗಿಸಿ,
ಕತ್ತಲೆ ಓಡಿಸಿ |
ಜ್ಞಾನವ ಬೆಳಸಿ, 

ಮೌಡ್ಯವ ಅಳಿಸಿ ||

ಮತ್ತೊಮ್ಮೆ ದೀಪಾವಳೀ ಹಬ್ಬದ
ಶುಭಾಶಯಗಳು


ಜೈನ ಧರ್ಮದಲ್ಲಿ ಅಕ್ಷಯ ತೃತೀಯ ಪರ್ವ ಮಹತ್ವ ಮತ್ತು ಹಿನ್ನೆಲೆ

May 2, 2010

ಭಾರತವು ಸಂಸ್ಕೃತಿ ಪ್ರಧಾನ ದೇಶ.ಇಲ್ಲಿ ವಿವಿಧ ಧರ್ಮಗಳ ಸಂಗಮವಿದ್ದು,ತಮ್ಮದೇ ಆದ ಆಚಾರ,ವಿಚಾರಗಳನ್ನು ಹೊಂದಿವೆ.ವಿಶ್ವದ ಪ್ರಾಚೀನ ಧರ್ಮಗಳಲ್ಲಿ ಜೈನ ಧರ್ಮವೂ  ಒಂದಾಗಿದೆ.ಇದು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.ಜೈನ ಧರ್ಮದಲ್ಲಿ ೨೪ ತೀರ್ಥಂಕರರು ಆಗಿ ಹೋಗಿದ್ದಾರೆ.ಅವರಲ್ಲಿ ವೃಷಭ ನಾಥರು ಮೊದಲನೆಯವರದರೆ,ಮಹಾವೀರರು ಅಂತಿಮ ತೀರ್ಥಂಕರರು.ಪ್ರತ್ಯೇಕ ತೀರ್ಥಂಕರರ ಜೀವನದಲ್ಲಿ  ೫ ಪ್ರಮುಖ ಘಟನೆಗಳು ಸಂಭವಿಸುತ್ತವೆ.೧.ಗರ್ಭ ಕಲ್ಯಾಣ ೨.ಜನ್ಮ ಕಲ್ಯಾಣ ೩.ದೀಕ್ಷಾ ಕಲ್ಯಾಣ ೪.ಕೇವಲ ಜನನ ಕಲ್ಯಾಣ ಮತ್ತು ೫.ಮೋಕ್ಷ ಕಲ್ಯಾಣ(ನಿರ್ವಾಣ).ಇವಲ್ಲದೆ ಇನ್ನೂ ಅನೇಕ ಘಟನೆಗಳು ಅವರ ಜೀವನದಲ್ಲಿ ನಡೆದಿರುತ್ತವೆ ,ಅವುಗಳನ್ನು ಸಹ ಜೈನ ಧರ್ಮೀಯರು ವಿಶೇಷವಾಗಿ ಭಕ್ತಿ ಭಾವದಿಂದ ಆಚರಿಸುತ್ತಾರೆ.ಅವುಗಳಲ್ಲಿ “ಅಕ್ಷಯ ತೃತಿಯ”ವು ಒಂದು.

ಹಿನ್ನೆಲೆ:-

ತೀರ್ಥಂಕರ ವೃಷಭ ನಾಥ(ಆದಿನಾಥ)ರು ಸಂಸಾರದ ನಶ್ವರತೆಯನ್ನು ಅರಿತು ವೈರಾಗ್ಯವನ್ನು ಹೊಂದಿ ದೀಕ್ಷೆಯನ್ನು ಗ್ರಹಣೆ ಮಾಡಿ ತಪಸ್ಸಿಗೆ  ಕಾಡಿಗೆ ತೆರಳುತ್ತಾರೆ.೬ ತಿಂಗಳು ಕಠಿಣ ತಪಸ್ಸನ್ನು ಮಾಡಿದ ಮೇಲೆ ಆಹಾರಕ್ಕೆಂದು ನಗರಕ್ಕೆ ವಿಧಿ ಪೂರ್ವಕ ಆಗಮಿಸುತ್ತಾರೆ.ಆದರೆ ದಿಗಂಬರ ಮುನಿಗಳಿಗೆ ನವಧಾ ಭಕ್ತಿಯಿಂದ ಆಹಾರವನ್ನು ಕೊಡುವ ವಿಧಿಯನ್ನು ಶ್ರಾವಕ-ಶ್ರಾವಕಿಯರು ತಿಳಿದಿರುವುದಿಲ್ಲ.ಆ ಕಾರಣ ಜನರು ಮೊದಲೇ ಮಹಾರಾಜರಾಗಿದ್ದ  ಅವರನ್ನು ಸತ್ಕರಿಸುವ ಭಾವನೆಯಿಂದ ವಿವಿಧ ಒಡವೆ,ವಸ್ತ್ರಗಳನ್ನು ಕೆಲವು ನೀಡಲು ಮುಂದಾಗುತ್ತಾರೆ,ಕೆಲವರು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುವಂತೆ ಕೇಳಿಕೊಳ್ಳುತ್ತಾರೆ.ಆದರೆ  ಇದಾವುದನ್ನು ಬಯಸದ ಅವರು ಪುನಃ ಕಾಡಿಗೆ ತಪ್ಪಸ್ಸಿಗೆಂದು ಮರಳುತ್ತಾರೆ.ಇದಾಗಿ ೭ ತಿಂಗಳು ೯ ದಿನಗಳ ಉಪವಾಸದ ನಂತರ ಮತ್ತೆ ಹಸ್ತಿನಾಪುರ ಎಂಬ ನಗರಕ್ಕೆ ಆಹಾರಕ್ಕೆಂದು ಆಗಮಿಸುತ್ತಾರೆ.ಆವಾಗಲು ಪುನಃ ಅದೇ ಘಟನೆಗಳು ಮರುಕಳಿಸುತ್ತವೆ.ಆದರೆ ಅದೇ ನಗರದ  ರಾಜಾ ಶ್ರೇಯಾಂಸನು ಇವರ ದರ್ಶನಕ್ಕೆಂದು ಪರಿವಾರ ಸಹಿತ ಆಗಮಿಸುತ್ತಾನೆ.ಆಗ ಅವನಿಗೆ ಹಿಂದಿನ ಜನ್ಮದ ಜಾತಿ ಸ್ಮರಣೆ ಆಗುತ್ತದೆ.ಹಿಂದಿನ ಭವ(೮ನೆ)ದಲ್ಲಿ ಇವರಿಬ್ಬರು(ಆದಿನಾಥರು) ಸೆರೀ ದಿಗಂಬರ ಮುನಿಗಳಿಗೆ ನವಧಾ ಭಕ್ತಿಯಿಂದ ಆಹಾರ ನೀಡಿದ ಸ್ಮರಣೆ ಆಗುತ್ತದೆ.ತಕ್ಷಣವೇ ರಾಜಾ ಸೋಮನು ಮತ್ತು ಶ್ರೆಯಾಂಸನು ಸೆರೀ ನವಧಾ ಭಕ್ತಿಯಿಂದ ಮೊದಲಿಗೆ ಇಕ್ಷು(ಕಬ್ಬಿನ ಹಾಲು)ರಸವನ್ನು ನೀಡುತ್ತಾರೆ.ಅಹಾರವಾದಾಕ್ಷಣ ದೇವತೆಗಳು ಪಂಚಾಶ್ಚರ್ಯ ವೃಷ್ಟಿ ಮಾಡುತ್ತಾರೆ.ಜನರು ಜಯ ಜಯಕಾರಗಳನ್ನು ಹಾಕಿ ಸಂತೋಷ ಪಡುತ್ತಾರೆ.ವೃಷಭ ನಾಥರಿಗೆ ಮೊದಲು ಆಹಾರ(ಪಾರಣಾ)ವಾದ ದಿವಸ ವೈಶಾಖ ಶುಕ್ಲ ತೃತೀಯ ತಿಥಿಯಿದ್ದ ಕಾರಣ ಆ ದಿನವನ್ನು “ಅಕ್ಷಯ ತೃತೀಯ“ವೆಂದು ಆಚರಿಸಲಾಗುತ್ತದೆ.ಜೈನ ಧರ್ಮದಲ್ಲಿ ಮುನಿಗಳಿಗೆ ಆಹಾರ ದಾನ ಮಾಡುವುದೆಂದರೆ  ಅತ್ಯಂತ ಅತಿಶಯ,ಅಕ್ಷಯ ಪುಣ್ಯಕ್ಕೆ ಕಾರಣ ಎಂದು ಹೇಳಲಾಗಿದೆ.ಈ ದಿನ ಬಸದಿಗಳಲ್ಲಿ ವಿಶೇಷವಾಗೀ ಅಭಿಷೇಕ ಪೂಜೆ,ಉತ್ಸವಗಳನ್ನು ಆಚರಿಸಲಾಗುತ್ತದೆ.ಈ ದಿನ ದಿಗಂಬರ ಮುನಿಗಳಿಗೆ ,ವಿಶೇಷವಾಗಿ ಕಬ್ಬಿನ ಹಾಲನ್ನು ಆಹಾರ ದಾನದಲ್ಲಿ ನೀಡುವುದರಿಂದ ಧನ,ದಾನ್ಯಗಳು,ಮನೆಯಲ್ಲಿ ಸುಖ,ನೆಮ್ಮದಿ ಅಕ್ಷಯವಾಗಿ ವೃದ್ಧಿಯಾಗುತ್ತವೆ ಎಂಬ ನಂಬಿಕೆಯಿದೆ.

ಈ ವರ್ಷ ಮೇ ೧೬ ರವಿವಾರದ ಬಂದಿರುತ್ತದೆ.

  • ತೀರ್ಥಂಕರ ವೃಷಭ ನಾಥರ ಸಂಕ್ಷೇಪ ಜೀವನ ಪರಿಚಯ-

  1. ತಂದೆ-ರಾಜಾ ನಾಭೀರಾಯ(೧೪ ನೆ ಮನು)
  2. ತಾಯೀ-ರಾಣೀ ಮರುದೇವಿ
  3. ಜನ್ಮ ಸ್ಥಳ-ಅಯೋಧ್ಯ(ಉ.ಪ್ರ)
  4. ಗರ್ಭಕಲ್ಯಾಣ-ಆಷಾಡ ಕೃಷ್ಣ ೨
  5. ಜನ್ಮ ಕಲ್ಯಾಣ-ಚೈತ್ರ ಕೃಷ್ಣ ೯
  6. ದೀಕ್ಷಾ ಕಲ್ಯಾಣ-ಚೈತ್ರ ಕೃಷ್ಣ ೯
  7. ಕೇವಲ ಜ್ಞಾನ-ಪಾಲ್ಗ್ಹುಣ ಕೃಷ್ಣ ೧೧
  8. ಮೋಕ್ಷ(ನಿರ್ವಾಣ)ಕಲ್ಯಾಣ-ಮಾಘ ಕೃಷ್ಣ ೧೪
  9. ಜನತೆಗೆ ಕಲಿಸಿದ 6 ವಿದ್ಯೆಗಳು-ಅಸಿ,ಮಸಿ,ಕೃಷಿ,ವಿಧ್ಯೆ,ವಾಣಿಜ್ಯ,ಮತ್ತು ಶಿಲ್ಪ ಕಲೆ.
  10. ಪಟ್ಟ ರಾಣೀಯರು-ನಂದಾ(ಯಶಸ್ವತೀ),ಸುನಂದಾ.
  11. ಪುತ್ರರು-೧೦೧(ಭಾರತ,ಬಾಹುಬಲೀ ಸೇರೀ)
  12. ಪುತ್ರೀಯರು-ಬ್ರಾಮ್ಹೀ,ಸುಂದರೀ.(ಬ್ರಾಮ್ಹಿಗೆ ಅಕ್ಷರ ವಿಧ್ಯೆ,ಸುಂದರೀಗೆ ಅಂಕ ವಿಧ್ಯೆ ಕಳಿಸಿದರು.)
  13. ದೀಕ್ಷೆ(ವೈರಾಗ್ಯ)ಗೆ ಕಾರಣ-ನೀಲಾಂಜನ ನೃತ್ಯ.
  14. ದೀಕ್ಷಾ ಸ್ಥಳ-ಪ್ರಯಾಗ,ಸಿದ್ದಾರ್ಥಕ ವನದಲ್ಲಿ,ವಟ ವೃಕ್ಷದ ಕೆಳಗೆ.
  15. ಪ್ರಮುಖ ಗಣಧರ-ವೃಷಭ ಸೇನ.
  16. ಪ್ರಮುಖ ಆರ್ಯಿಕಾ-ಬ್ರಾಮ್ಹೀ.
  17. ಪ್ರಮುಖ ಉಪಸ್ಥಿತಿ-ಭರತ ಚಕ್ರವರ್ತೀ.(ಈತನಿಂದಲೇ ನಮ್ಮ ದೇಶಕ್ಕೆ ಭಾರತ ಎಂದು ಹೆಸರು ಬಂತು ಅನ್ನುವ ಉಲ್ಲೇಖಗಳು ಸಿಗುತ್ತವೆ)
  18. ಆಯು,ಎತ್ತರ-೮೪ ಲಕ್ಷ ಪೂರ್ವ ಮತ್ತು ೫೦೦ ಧನುಸ್ಸು ಎತ್ತರ.
  19. ಇತರೆ ಹಸರುಗಳು-ಆದಿನಾಥ,ಪುರುದೇವ,ಆದಿ ಬ್ರಮಂಹ,ಪ್ರಜಾಪತೀ.


“Eleven Hints for Life”

April 8, 2010

1. It hurts to love someone and not be loved in return.

But what is more painful is to love someone and never

find the courage to let that person know how you feel.

2. A sad thing in life is when you meet someone who

means a lot to you, only to find out in the end that it was

never meant to be and you just have to let go.

3. The best kind of friend is the kind you can sit on a

porch swing with, never say a word, and then walk away

feeling like it was the best conversation you’ve ever had.

4. It’s true that we don’t know what we’ve got until we lose

it, but it’s also true that we don’t know what we’ve been

missing until it arrives.

5. It takes only a minute to get a crush on someone, an

hour to like someone, and a day to love someone-but it

takes a lifetime to forget someone.

6. Don’t go for looks, they can deceive. Don’t go for wealth,

even that fades away. Go for someone who makes you

smile because it takes only a smile to make a dark day

seem bright.

7. Dream what you want to dream, go where you want to go,

be what you want to be. Because you have only one life and

one chance to do all the things you want to do.

8. Always put yourself in the other’s shoes. If you feel that it

hurts you, it probably hurts the person too.

9. A careless word may kindle strife. A cruel word may wreck

a life. A timely word may level stress. But a loving word may

heal and bless.

10. The happiest of people don’t necessarily have the best

of everything they just make the most of everything that comes

along their way.

11. Love begins with a smile, grows with a kiss, ends with

a tear. When you were born, you were crying and everyone

around you was smiling. Live your life so that when you die,

you’re the one smiling and everyone around you is crying.

*- Unknown*


Follow

Get every new post delivered to your Inbox.